ವಿಶ್ರುತ್ ಆಗ್ರೋ ಇಂಡಸ್ಟೀಸ್ ನಲ್ಲಿ ಉತ್ಪಾದನೆಗೊಳ್ಳುವ ಭೂ ಸಿರಿ ಆರ್ಗ್ಯಾನಿಕ್ ಫರ್ಟಿಲೈಸರ್‌ನ್ನು, ಕನಿಷ್ಠ 5500 ರೂಪಾಯಿ ಮೌಲ್ಯದ ಫರ್ಟಿಲೈಸರ್ ಕೊಂಡಾಗ ನೀವು ನೀಡಿದ ಮುಂಗಡ 1000 ರೂಪಾಯಿಯನ್ನು ಕಡಿತಗೊಳಿಸಿ, 4500 ರೂಪಾಯಿಯನ್ನು ಪಡೆದು, ನಿಮಗೆ 5500 ರೂಪಾಯಿ ಮೌಲ್ಯದ ವಸ್ತುವನ್ನು ನೀಡಲಾಗುವುದು.(ಮೇಲೆ ತಿಳಿಸಿರುವ ಹಾಗೆ 5500 ರೂಪಾಯಿ ಮೌಲ್ಯದ ಭೂಸಿರಿ ಆರ್ಗ್ಯಾನಿಕ್ ಫರ್ಟಿಲೈಸರ್‌ನ್ನು ನೀವು ನಮ್ಮಿಂದ ತೆಗೆದುಕೊಳ್ಳದಿದ್ದರೂ, ನೀವು ನೀಡಿದ ಮುಂಗಡ 1000 ರೂಪಾಯಿಯನ್ನು ಹಿಂಪಡೆಯಲು,1000 ರೂಪಾಯಿ ಮೌಲ್ಯದ ಯಾವುದೇ ವಸ್ತುವನ್ನು ತೆಗೆದುಕೊಳ್ಳುವ/ಕೊಡುವ ಅವಕಾಶ ಇರುವುದಿಲ್ಲ, ಬದಲಿಗೆ 5500 ರೂಪಾಯಿ ಮೊತ್ತದ ಭೂಸಿರಿ ಆರ್ಗ್ಯಾನಿಕ್ ಫರ್ಟಿಲೈಸರ್‌ನ್ನು ಖರೀದಿಸಿಯೇ ನೀವು ನೀಡಿರುವ 1000 ರೂಪಾಯಿ ಮುಂಗಡವನ್ನು ವಜಾಮಾಡಿಕೊಳ್ಳಬೇಕು.ಅಥವಾ ನೀವು ನಮ್ಮಿಂದ ಖರೀದಿಸುವ ಭೂ ಸಿರಿ ಆರ್ಗ್ಯಾನಿಕ್ ಪರ್ಟಿಲೈಸರ್‌ನ್ನು, ಗೋಉತ್ಪನ್ನವನ್ನು ಮತ್ತು ಸಾವಯವ ಉತ್ಪನ್ನಗಳನ್ನು ಪ್ರತಿ ಬಿಡಿ ಬಿಡಿಯಾಗಿ ಅನೇಕ ಬಾರಿ ಖರೀದಿಸಿದ ಮೊತ್ತಕ್ಕೆ 10% ಖಡಿತವಾಗುದರ ಮೂಲಕ ಅ ಖಡಿತವಾದ ಮೊತ್ತವು ನೀವು ಮೊದಲು ಪಾವತಿಸಿದ ಮುಂಗಡದಲ್ಲಿ ಹಂತ ಹಂತವಾಗಿ ಕಡಿತವಾಗಿ ವಜಾಗೊಳ್ಳುತ್ತದೆ).ಇದು ನಿಮ್ಮ ಜೀವಿತಾವಧಿಯಲ್ಲಿ ಯಾವಾಗ ಬೇಕಾದರೂ ವಜಾಮಾಡಿಕೊಳ್ಳಬಹುದು. ಈ ಯೋಜನೆಯು ನಿಮ್ಮ ನಾಮಿನಿಗೆ ವರ್ಗಾವಣೆಗೊಳ್ಳಲಿದೆ.
ನೀವು ಖರೀದಿಸುವ ಭೂಸಿರಿ ಆರ್ಗ್ಯಾನಿಕ್ ಫರ್ಟಿಲೈಸರ್‌ನ್ನು 40 ಕೆ.ಜಿ ಮೇಲ್ಪಟ್ಟ ಬ್ಯಾಗನ್ನು ನಮ್ಮ ತಾಲೂಕು ವ್ಯಾಪ್ತಿಯ ಕಚೇರಿಯಲ್ಲಿ ಒದಗಿಸಲಾಗುವುದು.ಭೂಸಿರಿ ಆರ್ಗ್ಯಾನಿಕ್ ಪರ್ಟಿಲೈಸರ್ 1ಕೆ.ಜಿ, 5ಕೆ.ಜಿ, 10ಕೆ.ಜಿ, 25ಕೆ.ಜಿ ಬ್ಯಾಗಳನ್ನು ಹಾಗೂ ಗೋಉತ್ಪನ್ನ ಮತ್ತು ಸಾವಯವ ಉತ್ಪನ್ನಗಳನ್ನು ಗ್ರಾಮ ವ್ಯಾಪ್ತಿಯ ನಿಗದಿತ ಸ್ಥಳದಲ್ಲಿ, ನಿಗದಿತ ಸಮಯದಲ್ಲಿ ಒದಗಿಸಲಾಗುವುದು
ನೀವು ನೀಡಿದ 1000 ರೂಪಾಯಿ ಮುಂಗಡ ಪಾವತಿಯಿಂದ ಖರೀದಿ ಮುಗಿದ ನಂತರ, ಮರು ಖರೀದಿಸುವ ಆರ್ಗ್ಯಾನಿಕ್ ಫರ್ಟಿಲೈಸರ್‌ಗೆ 5% ರಿಂದ 20% ರಿಯಾಯಿತಿ ದೊರೆಯುತ್ತದೆ.ಅಲ್ಲದೆ, ಪ್ರತಿ ಖರೀದಿಯ ಮೊತ್ತದಲ್ಲಿ 3% ಕ್ಯಾಶ್ ಪಾಯಿಂಟ್‌ಗಳು( Reward Point VISHRUTH AI CARD) ಮೂಲಕ ಸಿಗಲಿದೆ ಜೊತೆಗೆ ಗೋ ಉತ್ಪನ್ನ ಹಾಗೂ ಸಾವಯವ ಉತ್ಪನ್ನಗಳ ಖರೀದಿಯಲ್ಲಿ 1% ರಿಂದ 3% ಕ್ಯಾಶ್ ಪಾಯಿಂಟ್‌ಗಳು(Reward Point VISHRUTH AI CARD) ಮೂಲಕ ಸಿಗಲಿದೆ.
ನೀವು ನಮ್ಮ ಉತ್ಪನ್ನಗಳನ್ನು ಕೊಳ್ಳಲು ರೂ.1000 ಮುಂಗಡವನ್ನು ನೀಡುವುದರುಂದ ನೀವು ಈ ಲಕ್ಕಿ ಡ್ರಾ ನಲ್ಲಿಯೂ ಭಾಗಿಯಾಗುವಿರ

ನಾವು ಮುಂದಿನ ದಿನದಲ್ಲಿ ಹೆಸರಿಸುವ ನಿಮ್ಮ ಹತ್ತಿರದ ಫರ್ನಿಚರ್ ಅಂಗಡಿಯಲ್ಲಿ 15000 ರೂಪಾಯಿ ಮೇಲ್ಪಟ್ಟ ಖರೀದಿಗೆ 3% ರಿಂದ 20% ವರೆಗೆ ರಿಯಾಯಿತಿ ಪಡೆಯುವ ಅವಕಾಶ ದೊರೆಯುತ್ತದೆ.ಎಲೆಕ್ಟ್ರಾನಿಕ್ ಅಂಗಡಿಯಲ್ಲಿ 15000 ರೂಪಾಯಿ ಮೇಲ್ಪಟ್ಟ ಖರೀದಿಗೆ 3% ರಿಂದ 20% ರಿಯಾಯಿತಿ ಪಡೆಯುವ ಅವಕಾಶ ಇದೆ.ಬಟ್ಟೆ ಅಂಗಡಿಯಲ್ಲಿ ಕನಿಷ್ಠ 3000 ಮೇಲ್ಪಟ್ಟ ಖರೀದಿಗೆ 3% ರಿಂದ 10% ರಿಯಾಯಿತಿ ಪಡೆಯುವ ಅವಕಾಶ.ಮಿನಿ ಮಾರ್ಟ್ ಮತ್ತು ಸೂಪರ್ ಮಾರ್ಕೆಟ್‌ಗಳಲ್ಲಿ ಕನಿಷ್ಠ 5000 ಖರೀದಿಗೆ 0.50% ರಿಂದ 10% ರಿಯಾಯಿತಿ ಪಡೆಯುವ ಅವಕಾಶ.ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನು ಅನೇಕ ಸೇವೆಗಳೊಂದಿಗೆ ರಿಯಾಯಿತಿಯನ್ನು ಪಡೆಯುವಿರಿ.
ನೀವು ನೊಂದಾಯಿಸಿಕೊಂಡ ಕನಿಷ್ಠ 45/65 ದಿನಗಳ ನಂತರವೇ ಕಡ್ಡಾಯವಾಗಿ ಖರೀದಿಯನ್ನು ಪ್ರಾರಂಭಿಸಬೇಕು.(ಮುಂದಿನ ದಿನಗಳಲ್ಲಿ ನೊಂದಾವಣೆಯಾದ 10 ದಿನಗಳ ಒಳಗೆ ಖರೀದಿಗೆ ಅವಕಾಶ ಮಾಡಿಕೊಡಲಾಗುವುದು.) ಗೋ ಉತ್ಪನ್ನ ಹಾಗೂ ಸಾವಯವ ಉತ್ಪನ್ನಗಳ ಖರೀದಿಯು 7 ದಿನಗಳ ನಂತರದಲ್ಲಿ ಕನಿಷ್ಠ ಖರೀದಿಯೊಂದಿಗೆ ಪ್ರಾರಂಬಿಸಬಹುದು.
ಈ ಮೇಲಿನ ಯೋಜನೆಯ ನಿಯಮಗಳಿಗೆ ಹಾಗೂ ಷರತ್ತುಗಳಿಗೆ ನಾನು ಸ್ವಯಂ ಒಪ್ಪಿಕೊಂಡು, 1000 ರೂಪಾಯಿಯನ್ನು ಮುಂಗಡವಾಗಿ ಪಾವತಿಸುತ್ತಿದ್ದೇನೆ.