ನಮ್ಮ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ

ನಮ್ಮ ಸಂಸ್ಥೆಯ ಮ್ಯಾನೇಜಿಂಗ್ ಪಾರ್ಟ್ನರ್ ಆದ ವೀರೇಂದ್ರ ಎಸ್. ಪೂಜಾರಿ ಅವರನ್ನು ಭೇಟಿ ಮಾಡಿ.

ನಮ್ಮ ಸಂಸ್ಥೆಯ ಮ್ಯಾನೇಜಿಂಗ್ ಪಾರ್ಟ್ನರ್ ಆದ ವೀರೇಂದ್ರ ಎಸ್. ಪೂಜಾರಿ ಅವರು ವಿಶ್ರುತ್ ಆಗ್ರೋ ಇಂಡಸ್ಟ್ರೀಸ್ (ರಿ) ನಲ್ಲಿ ದೀರ್ಘಕಾಲದ ಅನುಭವ ಹೊಂದಿದ್ದಾರೆ. ಅವರ ದೂರದರ್ಶತ್ವ ಹಾಗೂ ಮಾರ್ಗದರ್ಶನದಲ್ಲಿ ನಮ್ಮ ಸಂಸ್ಥೆಯು ಉನ್ನತ ಎತ್ತರಕ್ಕೆ ಬೆಳೆದಿದೆ. ಶ್ರೀ ವೀರೇಂದ್ರ ಎಸ್. ಪೂಜಾರಿಯವರು ೨೦೨೦-೨೧ ರಲ್ಲಿ ಪ್ರಾರಂಭಗೊಂಡ ಭೂಮಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್., ಕುಂದಾಪುರ ಇದರ ಸಂಸ್ಥಾಪಕರು ಹಾಗೂ ಹಾಲಿ ಅಧ್ಯಕ್ಷರು. ಈ ಕ್ಷೇತ್ರದಲ್ಲಿ ಅಪಾರ ಅನುಭವದಿಂದ ಕರ್ನಾಟಕದಾದ್ಯಂತ ಹಲವು ಜನರೊಂದಿಗೆ ಬೆರೆತು ವಿಶ್ವಾಸವನ್ನು ಗಳಿಸಿದ್ದಾರೆ. ಅಲ್ಲದೆ, ಬೈಂದೂರು ಭೂಮಿ ರೈತ ಉತ್ಪಾದಕರ ಕಂಪನಿ ನಿಯಮಿತ ಇದರ ಸ್ಥಾಪಕರು ಹಾಗೂ ಹಾಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಈ ಸಂಸ್ಥೆಯ ಮೂಲಕ ಕರ್ನಾಟಕದಾದ್ಯಂತ ರೈತ ಉತ್ಪಾದಕರೊಂದಿಗೆ ಸಂಪರ್ಕವನ್ನು ಹೊಂದಿ, ರೈತಾಪಿ ವರ್ಗದವರೊಂದಿಗೆ ಕೂಡಿ, ವ್ಯವಹರಿಸಿ ರೈತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ೨೦೧೭ ರಲ್ಲಿ ವಿಶ್ರುತ್ ಮಾರ್ಕೆಟಿಂಗ್ ಇಂಡಿಯಾ ಎಂಬ ಕೃಷಿ ಆಧಾರಿತ ಸಂಸ್ಥೆಯನ್ನು ಹುಟ್ಟುಹಾಕಿ, ಕರ್ನಾಟಕದಾದ್ಯಂತ ಕೃಷಿ ಪೂರೈಕೆಯ ವಸ್ತುಗಳನ್ನು ಒದಗಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ಅಲ್ಲದೆ ವಿಶ್ರುತ್ ಅಗ್ರಿ ಬಿಸಿನೆಸ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಕೋಣ್ಕಿ ಹಾಲು ಉತ್ಪಾದಕ ಸಹಕಾರಿ ಸಂಘದಲ್ಲಿ ಸತತ ಎರಡನೇ ಬಾರಿ ನಿರ್ದೇಶಕರಾಗಿ ಹೈನುಗಾರಿಕೆಯಲ್ಲಿ ಅನುಭವವನ್ನು ಹೊಂದಿದ್ದಾರೆ. ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಜೊತೆಗೆ ಅನೇಕ ಗೋಶಾಲೆಗಳು, ಗೋ ಉತ್ಪನ್ನಗಳ ಬಗ್ಗೆ ತರಬೇತಿಗಳನ್ನು ಪಡೆದು, ಗೋಶಾಲೆ ಹಾಗೂ ಗೋ ಉತ್ಪನ್ನಗಳ ಮಹತ್ವವನ್ನು ಕರ್ನಾಟಕದಾದ್ಯಂತ ವಿಸ್ತರಿಸಲು ಮುಂದಾಗಿದ್ದಾರೆ. ನಾವೀನ್ಯತೆ ಮತ್ತು ಗ್ರಾಹಕರ ತೃಪ್ತಿಯೇ ಅವರ ಮುಖ್ಯ ಗುರಿಯಾಗಿದೆ. ಅವರ ನೇತೃತ್ವದಲ್ಲಿ ನಾವು ಹೊಸ ಮೈಲಿಗಲ್ಲುಗಳನ್ನು ತಲುಪಲು ಉತ್ಸುಕರಾಗಿದ್ದೇವೆ. ಇವರ ಹಿಂದೆ ದೊಡ್ಡ ತಂಡವೇ ಕೆಲಸ ಮಾಡುತ್ತಿದ್ದು, ನಮ್ಮ ಸಂಸ್ಥೆಯ ಯಶಸ್ಸಿನ ಹಿಂದಿನ ಶಕ್ತಿ ಮ್ಯಾನೇಜಿಂಗ್ ಪಾರ್ಟ್ನರ್ ಆದ ವೀರೇಂದ್ರ ಎಸ್. ಪೂಜಾರಿ.